ನಕಲಿ ಸಹಿ ವಿವಾದ:
ಮಮತಾ ಬ್ಯಾನರ್ಜಿ
ನಿವಾಸದ ಮೇಲೆ ಸಿಐಡಿ ದಾಳಿ

ಕೋಲ್ಕತ್ತಾ ಜೂ 9 ಪಿಟಿಐ:ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕಾಳಿಘಾಟ್ ನಿವಾಸದ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ನಕಲಿ ಸಹಿ ವಿವಾದದ ತನಿಖೆಯ ಭಾಗವಾಗಿ ಸಿಐಡಿ ಅಧಿಕಾರಿಗಳು ಮಂಗಳವಾರ ಏಕಾಏಕಿ ದಾಳಿ ನಡೆಸಿದ್ದಾರೆ.
ಮಮತಾ ಬ್ಯಾನರ್ಜಿ ಅವರು ಕಚೇರಿಯಾಗಿಯೂ ಬಳಸುತ್ತಿರುವ ಹರೀಶ್ ಚಟರ್ಜಿ ರಸ್ತೆಯ 30ಬಿ ಸಂಖ್ಯೆಯ ನಿವಾಸಕ್ಕೆ ಕಾಳಿಘಾಟ್ ಪೊಲೀಸ್ ಸಿಬ್ಬಂದಿ ಮತ್ತು ಭಾರಿ ಸಂಖ್ಯೆಯ ಮಹಿಳಾ ಪೊಲೀಸರೊಂದಿಗೆ ಸಿಐಡಿ ಅಧಿಕಾರಿಗಳು ಧಾವಿಸಿದರು.
ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನದ ಮಾನ್ಯತೆಗಾಗಿ ಸ್ಪೀಕರ್‌ಗೆ ಸಲ್ಲಿಸಲಾಗಿದ್ದ ಪ್ರಸ್ತಾವನೆಯಲ್ಲಿ ಟಿಎಂಸಿ ಶಾಸಕರ ಸಹಿಗಳನ್ನು ನಕಲು ಮಾಡಲಾದ ಆರೋಪಕ್ಕೆ ಸಂಬಂಧಿಸಿದಂತೆ ವಿವರ ನೀಡಿ ಎಂದು ಸಿಐಡಿ ನೋಟಿಸ್ ಜಾರಿ ಮಾಡಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ.
ಟಿಎಂಸಿ ಶಾಸಕರ ಸಹಿಗಳನ್ನು ಹರೀಶ್ ಚಟರ್ಜಿ ರಸ್ತೆಯ ಪಕ್ಷದ ಕೇಂದ್ರ ಕಚೇರಿಯಲ್ಲಿ ಸಂಗ್ರಹಿಸಲಾಗಿತ್ತು ಎಂದು ಅಭಿಷೇಕ್ ಬ್ಯಾನರ್ಜಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದರು. ಆ ಹೇಳಿಕೆಯ ಆಧಾರದ ಮೇಲೆಯೇ ನಾವು ತನಿಖೆಯ ಭಾಗವಾಗಿ ಇಲ್ಲಿಗೆ ಬಂದಿದ್ದೇವೆ’ ಎಂದು ಸಿಐಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನು, ಟಿಎಂಸಿ ಮುಖಂಡ ಹಾಗೂ ಮಾಜಿ ಸಂಸದ ಸುಭಶಿಶ್ ಚಕ್ರವರ್ತಿ ಅವರು ಸಿಐಡಿ ಅಧಿಕಾರಿಗಳನ್ನು ನಿವಾಸದ ಒಳಗೆ ಬಿಟ್ಟಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ‘ಅಭಿಷೇಕ್ ಬ್ಯಾನರ್ಜಿ ಅವರ ಅನುಪಸ್ಥಿತಿಯಲ್ಲಿ ನಾವು ಸಿಐಡಿಗೆ ಆವರಣದೊಳಗೆ ಪ್ರವೇಶಿಸಲು ಅನುಮತಿ ನೀಡಿಲ್ಲ. ಅವರು ಬಂದ ನಂತರ ಸಿಐಡಿ ಅಧಿಕಾರಿಗಳು ಬಂದು ಶೋಧ ನಡೆಸಬಹುದು’ ಎಂದು ಚಕ್ರವರ್ತಿ ಹೇಳಿದ್ದಾರೆ.
ಟಿಎಂಸಿ ಹಿರಿಯ ಶಾಸಕ ಸೋವಂದೇಬ್ ಚಟ್ಟೋಪಾಧ್ಯಾಯ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾನ್ಯ ಮಾಡುವಂತೆ ಕೋರಿ ಸ್ಪೀಕರ್‌ಗೆ ಕಳುಹಿಸಲಾದ ಪ್ರಸ್ತಾವನೆಯಲ್ಲಿ ಹಲವು ಶಾಸಕರ ನಕಲಿ ಸಹಿಗಳನ್ನು ಬಳಸಲಾಗಿದೆ ಎಂಬುದು ಮುಖ್ಯ ಆರೋಪವಾಗಿದೆ. ಈ ಆರೋಪಗಳ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಸಿಐಡಿ ತನಿಖೆ ನಡೆಸುತ್ತಿದೆ.
ಸೂಚನೆ:- ಇತರ ಸುದ್ದಿಗಳನ್ನು ,youtu.be ದಲ್ಲಿ ನೋಡ ಬಹುದು
https://youtu.be/VdQEE2NjfjM?si=aMOrv_Y_tWdJokHV
.........................................................
ANUDINA Kannada News Website.
for latest news and reports, insightful analyses, on politics, policy,governance, Social and cultural changeThese are the four pillars of ANUDINA - a new media platform where readers come for daily news.
Founder /Editor-in-Chief:
Ganesh Inamdar.Journalist.Karnataka.
Founded-JUL/1/2016.
Contacts: 9886667478.
E-mail: ptiganesh.bly@gmail.com